ಅರಿಪ್ಪು : ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿರುವ ಒಂದು ಬೃಹತ್ ಶಿಲಾಗೋರಿ
ನೆಲೆ. 1991ರ ಉತ್ಖನನದಲ್ಲಿ ನೆಲದಡಿಯ ಆಯತಾಕಾರದ ಕಂಡಿಗಳಿಲ್ಲದ ಕೋಣೆ
ಗೋರಿಗಳನ್ನು ಬೆಳಕಿಗೆ ತರಲಾಯಿತು. ಕೋಣೆಯೊಳಗಿನ ನೆಲದ ಮೇಲೆ ಮರಳನ್ನು
ತುಂಬಲಾಗಿತ್ತು. ಈ ಮರಳಿನ ಕೆಳ ಹಂತದಲ್ಲಿ ಮಡಕೆ, ಲೋಟ, ಮುಚ್ಚಳ ಮೊದಲಾದ
ಮಣ್ಪಾತ್ರೆಗಳು ಮತ್ತು ಅವುಗಳ ಕೆಳಗೆ ಕಬ್ಬಿಣದ ಸಲಕರಣೆಗಳಿದ್ದವು.  ಪೂರ್ಣ ಕೆಂಪು,
ಕಪ್ಪು ಲೇಪನದ ಮತ್ತು ಕೆಂಪು-ಕಪ್ಪು ದ್ವಿವರ್ಣ ಪ್ರಕಾರಗಳ ಪಾತ್ರೆಗಳು, ಚೂರಿ, ಕತ್ತಿ,
ಚಾಕು ಮೊದಲಾದ ಕಬ್ಬಿಣದ ಉಪಕರಣಗಳೂ ಇದ್ದವು.
(ಎ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ